ಕೃತಕ ಜಾಲರಿ ಬಟ್ಟೆ

ಗಾಜ್ ಎಂಬ ನೇಯ್ಗೆಯ ಅಣುಕುರೂಪ (ಮಾಕ್‍ಲಿನೊ). ಈ ನೇಯ್ಗೆಯನ್ನು ಬೆದಗಳಲ್ಲಿ ಎಳೆಗಳನ್ನು ತುಂಬುವ ವಿಶೇಷತೆಯಿಂದಲೂ ಹಾಗೆ ತುಂಬಿದ ಎಳೆಗಳನ್ನು ವಿಶೇಷ ರೀತಿಯಿಂದ ನೇಯುವುದರಿಂದಲೂ ತಯಾರಿಸಬಹುದು.

ಚಿತ್ರ-1

 ಅತಿ ಸುಲಭವಾಗಿ ಈ ಬಟ್ಟೆಯನ್ನು ಒಂದು ತಟ್ಟಿನ ಮನೆಯಲ್ಲಿ ಮೂರು ಎಳೆಗಳಂತೆ ತುಂಬಿ, ತಟ್ಟಿನ ಮನೆಗಳನ್ನು ಚಿತ್ರದಲ್ಲಿ ಉ ಎಂಬಲ್ಲಿ ತೋರಿಸಿರುವಂತೆ ಬಿಟ್ಟು, ಅದಕ್ಕೆ ತಕ್ಕುದಾದ ನೇಯ್ಗೆಯಿಂದ ನೇಯ್ದು ತಯಾರಿಸಬಹುದು. ಮಾದರಿ ಬಟ್ಟೆಯೊಂದರಲ್ಲಿ ಅಂಗುಲಕ್ಕೆ 68 ಹಾಸು ಎಳೆಗಳು, 80 ಹೊಕ್ಕು ಎಳೆಗಳು ಇರುತ್ತವೆ. ಹಾಸಿಗೆ 30ರ ದಾರವನ್ನು ಹೊಕ್ಕಿಗೆ 32ರ ದಾರವನ್ನು ಉಪಯೋಗಿಸುವರು.
(ವಿ.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ